ಎಲ್ಲಾ ರೈತರಿಗೆ 5 ಲಕ್ಷ ರೂ ಬಡ್ಡಿ ಇಲ್ಲದೆ ಸಾಲ. ಸಾಲ ಪಡೆಯಲು ಇರಬೇಕಾದ ಅರ್ಹತೆಗಳು?ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ ನೋಡಿ
ಎಲ್ಲಾ ರೈತರಿಗೆ 5 ಲಕ್ಷ ರೂ ಬಡ್ಡಿ ಇಲ್ಲದೆ ಸಾಲವನ್ನು ಪಡೆಯಲು ಇರಬೇಕಾದ ಅರ್ಹತೆಗಳು
5 ಲಕ್ಷ ಸಾಲವನ್ನು ಪಡೆಯಲು ಇರುವ ನಿಯಮಗಳು
ಬಡ್ಡಿ ರಹಿತ ಸಾಲವನ್ನು ಎಲ್ಲಿ ನೀಡಲಾಗುತ್ತದೆ?
5 ಲಕ್ಷ ಸಾಲ ಯಾವುದೇ ಬಡ್ಡಿ ಇಲ್ಲದೆ ಇರುವ ಸಾಲದ ನಿಯಮಗಳು :
ಇದೆಲ್ಲದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗೆ ಲೇಖನದಲ್ಲಿ ಇದೆ ನೋಡಿ
ಎಲ್ಲಾ ರೈತರಿಗೆ ಯಾವುದೇ ಬಡ್ಡಿ ಇಲ್ಲದೆ 5 ಲಕ್ಷ ರೂಪಾಯಿ ವರೆಗೆ ಸಾಲ ನೀಡುವ ಯೋಜನೆಯನ್ನು ಸರ್ಕಾರ ಏಪ್ರಿಲ್ 1ರಿಂದ ಜಾರಿಗೆ ತರಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಹೇಳಿಕೆಯನ್ನು ನೀಡಿದ್ದಾರೆ . ಕಳೆದ ತಿಂಗಳು ವಿಧಾನಸೌಧದಲ್ಲಿ ಮಾತನಾಡಿದ , 5 ಲಕ್ಷ ರೂಪಾಯಿ ವರೆಗೆ ಯಾವುದೇ ಬಡ್ಡಿ ಇಲ್ಲದೆ ಬೆಳೆ ಸಾಲ ನೀಡಬೇಕೆಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಈ ಸಲದ ಬಜೆಟ್ ನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ರೈತರಿಗೆ ಉಪಯೋಗವಾಗುವ ಕೆಲವೊಂದು ಉತ್ತಮ ಯೋಜನೆ ಬಜೆಟ್ ನಲ್ಲಿ ಘೋಷಿಸಿದ್ದು, ಈ ಬಾರಿಯ ಬಜೆಟ್ ನಲ್ಲಿ ಕೃಷಿ ಹಾಗೂ ಇತರ ಚಟುವಟಿಕೆಗಳಿಗೆ ವಿವಿದ ಯೋಜನೆಗಳ ಮೂಲಕ ಹೆಚ್ಚಿನ ಅನುದಾನ ಘೋಷಿಸಿದೆ.
ಅದೇ ರೀತಿ ರೈತರಿಗೆ ಅನುಕೂಲವಾಗುವಂತೆ ಈ ಹಿಂದೆ ರೈತರಿಗೆ ನೀಡಲಾಗುತ್ತಿರುವ ಬಡ್ಡಿ ರಹಿತ ಸಾಲ 3 ಲಕ್ಷದ ಮಿತಿಯಿದ್ದು, ಈ ಬಜೆಟ್ ನಲ್ಲಿ ಇನ್ನು ಮುಂದೆ ಕೃಷಿಕರು 5 ಲಕ್ಷದ ತನಕ ಬಡ್ಡಿರಹಿತ ಸಾಲ ಪಡೆಯಬಹುದೆಂದು ಘೋಷಿಸಿದ್ದು ಇದರಿಂದ ರೈತ ಕುಟುಂಬಗಳಿಗೆ ಅನುಕೂಲಕರವಾಗಲಿದೆ.
5 ಲಕ್ಷ ಸಾಲ ಯಾವ ಯಾವ ಬ್ಯಾಂಕುಗಳಿಂದ ರೈತರಿಗೆ ಸಿಗುತ್ತದೆ?
ಈಗಾಗಲೇ ಹೆಚ್ಚಿನ ರೈತರು ಬಡ್ಡಿರಹಿತ ಸಾಲ ಪಡೆಯುತಿದ್ದು, ಒಂದು ವೇಳೆ ನೀವು ಹೊಸದಾಗಿ ಪಡೆಯಲು ಬಯಸಿದರೆ ನಿಮ್ಮ ಗ್ರಾಮದ ಕೋ-ಆಪರೇಟಿವ್ ಸೊಸೈಟಿ / ಕೃಷಿ ಸಹಕಾರಿ ಸಂಘದ ಬ್ಯಾಂಕು ಗಳಲ್ಲಿ ವಿಚಾರಿಸಿ, SDCC, DCC ಈ ರೀತಿಯ ಸಹಕಾರಿ ಬ್ಯಾಂಕುಗಳಲ್ಲೂ ನೀಡಲಾಗುತ್ತದೆ.
ಯಾವ ಯಾವ ಉದ್ಯೋಗವನ್ನು ಪ್ರಾರಂಭಿಸಲು 5 ಲಕ್ಷ ಬಡ್ಡಿ ಇಲ್ಲದೆ ಸಾಲ ರೈತರಿಗೆ ಸಿಗುತ್ತದೆ?
ಉಪಕರಣ ಖರೀದಿ ಮಾಡಲು,ಉಚಿತ ಗೊಬ್ಬರ ಖರೀದಿ ಬಿತ್ತನೆ ಬೀಜ, ,ಔಷಧಿ, ಸೇರಿದಂತೆ ರೈತರ ಕೃಷಿ ಚಟುವಟಿಕೆಗೆ ಉಪಗಯೋಗವಾಗಲೆಂದು ರೈತರಿಗೆ 5 ಲಕ್ಷದವರೇ ಯಾವುದೇ ಬಡ್ಡಿ ಇಲ್ಲದೆ ಸಾಲ ನೀಡಲಾಗುವುದು. ಕೃಷಿಯಲ್ಲಿ ದೊಡ್ಡ ಪ್ರಮಾಣದ ಬಿಸಿನೆಸ್ ಪ್ರಾರಂಭಿಸಲು , ಕೃಷಿ ಕುರಿ, ಮೇಕೆ, ಕೋಳಿ, ಹಂದಿ ಸಾಕಾಣಿಕೆಗೆ ಹಾಗೂ ರೇಷ್ಮೆ ಶೆಡ್ ಕಟ್ಟಡ ನಿರ್ಮಿಸಲು 5 ಲಕ್ಷ ರೂಪಾಯಿ ವರೆಗೆ ಯಾವುದೇ ಬಡ್ಡಿ ಇಲ್ಲದೆ ಸಾಲ ಸಿಗುತ್ತದೆ
5 ಲಕ್ಷ ಬಡ್ಡಿ ರಹಿತ ಸಾಲ ಪಡೆಯಲು ಇರಬೇಕಾದ ಅರ್ಹತೆಗಳು :
- ಸಾಲ ಪಡೆಯುವವರು ಬೇರೆ ರಾಜ್ಯದಲ್ಲಿ ವಾಸವಿದ್ದರೆ ಅವರ ಜಮೀನು ಕರ್ನಾಟಕದಲ್ಲಿ ಇದ್ದರೆ ಆ ರೈತರಿಗೆ 5 ಲಕ್ಷ ಸಾಲ ಸಿಗುವುದಿಲ್ಲ.
- 5 ಲಕ್ಷ ಸಾಲ ಪಡೆಯುವ ಅಭ್ಯರ್ಥಿಯ ವಾಸಿಸುವ ಪ್ರದೇಶದಲ್ಲಿ ಸಾಲ ಕೊಡುವ ಸಂಘವು ಇಲ್ಲದಿದ್ದರೆ ಅಂತಹ ರೈತರು ಅವರ ಸಮೀಪದ ಡಿಸಿಸಿ ಬ್ಯಾಂಕುಗಳ ಮೂಲಕ ಸಾಲ ಪಡೆಯಬಹುದು.
- 5 ಲಕ್ಷ ಸಾಲ ಪಡೆಯಬೇಕಾದರೆ ಅಂತಹ ರೈತರು ತಮ್ಮ ಸಮೀಪದ ಸಂಘ ಮತ್ತು ಅವರು ಹೊಂದಿರುವ ಜಮೀನು ಸಮೀಪದ ಜಾಗದಲ್ಲಿ ಮಾತ್ರ 5 ಲಕ್ಷ ಸಾಲವನ್ನು ಪಡೆಯಲು ಅರ್ಹರಾಗಿರುತ್ತಾರೆ.
