ಬೆಳೆ ವಿಮೆ ಪರಿಹಾರ ಹಣ ಜಮೆ ಆಗದೆ ಇರುವ ತಿರಸ್ಕರ ಪಟ್ಟಿ ಬಿಡುಗಡೆ. ಅರ್ಜಿ ಸಲ್ಲಿಸಲು ಏ.15 ಕೊನೆಯ ದಿನಾಂಕ

2021-22 ನೇ ಸಾಲಿನಲ್ಲಿ ವಿಮೆ ವಿಮೆ ನೋಂದಣಿ ಮಾಡಿಸಿದ ಪ್ರಕಟಿಸಿದ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಕುರಿತು ಪರಿಶೀಲಿಸಿ ಹತ್ತಿರದ ಆಧಾರ ನೋದಣಿ ಕೇಂದ್ರಗಳಲ್ಲಿ ಆಧಾರ ಕಾರ್ಡ್ ಸರಿಪಡಿಸಿ ಸಂಬಂಧಿಸಿದ ಬ್ಯಾಂಕ್‍ಗಳಲ್ಲಿ ಸರಿಪಡಿಸಿಕೊಂಡಲ್ಲಿ ಬೆಳೆ ವಿಮೆ ಪರಿಹಾರ ಮೊತ್ತ ಜಮೆ ಮಾಡಲು ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.2021-22ರ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ವಿಮಾll ಯೋಜನೆಯಲ್ಲಿ ವಿಮಾ ಪರಿಹಾರ ಪಡೆಯಲು ಅರ್ಹರಿದ್ದು, ಬೆಳೆಯ ಸಮೀಕ್ಷೆ ವಿವರದೊ೦ದಿಗೆ ಬೆಳೆ ಹೋಲಿಕೆ ಮಾಡಿದ ನ೦ತರ ತಾಳೆಯಾಗದ ಕೆಲ ಪ್ರಸ್ತಾವನೆಗಳನ್ನು ಸಂಬಂಧಿಸಿದ ವಿಮಾ ಕ೦ಪನಿಯವರು ತಿರಸ್ಕರಿಸಿ ವಿಮಾ ಮೊತ್ತ ಜಮ ಮಾಡಿರುವುದಿಲ್ಲ.ಅರ್ಜಿ ಸಲ್ಲಿಸಲು ಏ. 15 ಕೊನೆಯ ದಿನವಾಗಿದೆ.
ಬೆಳೆ ವಿಮೆ ಯಾವ ರೈತರು ಅರ್ಜಿಯನ್ನು ಸಲ್ಲಿಸಬೇಕು?
- ರೈತನು ಭಾರತೀಯ ಪ್ರಜೆ ಮತ್ತು ಭಾರತೀಯ ನಿವಾಸಿಯಾಗಿರಬೇಕು.
- ರೈತನು ರಬಿ, ಮುಂಗಾರು ಬೆಳೆ ಅಥವ ಇನ್ನಿತರ ವಾಣಿಜ್ಯ ಬೆಳೆ ಅಥವಾ ತೋಟಗಾರಿಕಾ ಬೆಳೆ ಹೊಂದಿರಬೇಕು.
3 ರೈತನು ಆಯಾ ಪ್ರಾಂತ್ಯದ ಕೃಷಿ ಸಚಿವಾಲಯ ಸೂಚಿಸಿರುವ ಬೆಳೆಗಳನ್ನೇ ಬೆಳೆಸಬೇಕು. ಆಯಾ ಪ್ರದೇಶದ ಭೂಮಿ ಹಾಗೂ ಹವಾಮಾನವನ್ನು ಆಧರಿಸಿ ಬೆಳೆಗಳನ್ನು ಸೂಚಿಸಿರಲಾಗುತ್ತದೆ. ಇದರಿಂದ ಬೆಳೆ ಹಾನಿ ಸಂಭವ ಕಡಿಮೆಯಿರುತ್ತದೆ.
4. ಫಸಲ್ ಬೀಮಾ ಯೋಜನೆಗೆ ಅರ್ಜಿ ಸಲ್ಲಿಸಿದ ರೈತರಿಗೆ ಮಾತ್ರ ಯಾವುದೇ ರೀತಿಯ ಧನ ಸಹಾಯ ನೀಡಲಾಗುವುದು.
5.ನೈಸರ್ಗಿಕ ವಿಪತ್ತು ಅಥವಾ ಕೀಟಬಾಧೆಯಿಂದಾದ ಹಾನಿಗೊಳಗಾದ ಬೆಳೆ ನಷ್ಟಕ್ಕೆ ರೈತನು ವಿಮಾ ಹಕ್ಕು ಪಡೆಯಬಹುದು.
6. ಇನ್ನಿತರ ಪ್ರಾಕೃತಿಕ ವಿಕೋಪಗಳಾದ ನೈಸರ್ಗಿಕ ಬೆಂಕಿ, ಬರ ಪರಿಸ್ಥಿತಿ, ಬಿರುಗಾಳಿ, ನೀರಿನಿಂದುಂಟಾಗುವ ಹಾನಿ, ಪ್ರವಾಹ, ಕೀಟಬಾಧೆ ಇವುಗಳಿಂದ ಸಂಭವಿಸುವ ಹಾನಿಗಳಿಗೆ ಪರಿಹಾರ ಪಡೆಯಬಹುದು.
7. ಕೇಂದ್ರ ಸರ್ಕಾರದ ಕೃಷಿಸಾಲದ ಖಾತೆ ಹೊಂದಿರುವಂತಹ ರೈತರು, ಯಾವುದೇ ಪರಿಶೀಲನೆಯಿಲ್ಲದೆ ಈ ಯೋಜನೆಯಲ್ಲಿ ವಿಮೆ ಪಡೆಯಲು ಅರ್ಹರಾಗಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸ್ಥಳಿಯ ರೈತ ಸಂಪರ್ಕ ಕೇಂದ್ರಗಳಿಗೆ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೇ ಹೋಗಿ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಬೆಳೆ ವಿಮೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
ಹಂತ 1:ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ವೆಬ್ಸೈಟ್ ಗೆ ಲಾಗಿನ್ ಆಗಬೇಕು. ವೆಬ್‌ಸೈಟ್ ಲೋಡ್ ಅದ ನಂತರ ರೈತರ ಅರ್ಜಿ ಸಲ್ಲಿಸುವ ವಿಭಾಗಕ್ಕೆ ಹೋಗಿ.
ಹಂತ 2: ಅದು ನಿಮ್ಮನ್ನು ಅರ್ಜಿಸಲ್ಲಿಸುವ ಪುಟಕ್ಕೆ ನಿರ್ದೇಶಿಸುತ್ತದೆ. ಮುಂದಿನ ಪುಟದಲ್ಲಿ ಬರುವ ಅಪ್ಲಿಕೇಶನ್ ನಲ್ಲಿ ವಿವರ ತುಂಬಬೇಕು.
ಹಂತ 3: ಮೂಲತಃ ಈ ಪುಟದಲ್ಲಿ ತಮ್ಮ ವೈಯುಕ್ತಿಕ ವಿವರಗಳನ್ನು ಹಾಗೂ ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸಲು ಕೇಳಲಾಗುತ್ತದೆ.
ಹಂತ 4: ನಂತರ ಪುಟದ ಕೆಳಭಾಗದಲ್ಲಿರುವ ಉಳಿಸಿ ಹಾಗೂ ಮುಂದುವರಿಯಿರಿ (click and save) ಬಟನ್ ಒತ್ತಿ ವಿವರ ನಮೂದಿಸಬೇಕು.
ಹಂತ 5: ಜಮೀನಿನ ವಿವರಗಳನ್ನು ಭರ್ತಿ ಮಾಡಿ, ನಿಗದಿತ ಪ್ರೀಮಿಯಂ ಮೊತ್ತ ಪಾವತಿಸಿದ ನಂತರ ನಿಮ್ಮ ಅರ್ಜಿಗಾಗಿ ಒಂದು ಟ್ರಾಕಿಂಗ್ ಸಂಖ್ಯೆ (tracking no.) ಬರುತ್ತದೆ.
ಇದನ್ನು ನಿಮ್ಮ ಅರ್ಜಿಯ ಸ್ಥಿತಿ ಅರಿಯಲು ಉಪಯೋಗಿಸಬಹುದು.
ಹಂತ 6:ಯಾವುದಾರರೂ ತಪ್ಪುಗಳು ಅಥವಾ ಬದಲಾವಣೆ ಮಾಡಬೇಕಾದ ಸಂದರ್ಭವಿದ್ದರೆ ಅರ್ಜಿಯನ್ನು ನಂತರವೂ ಮಾರ್ಪಡಿಸಬಹುದು
ಬೆಳೆ ಸಮೀಕ್ಷೆ ಎಲ್ಲಾ ವಿವರಗಳ ಜೊತೆಗೆ ಹೊ೦ದಾಣಿಕೆಯಾಗದೇರೈತರ ತಿರಸ್ಕೃತಗೊಂಡ ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಮಾಹಿತಿ ನೀಡಲಾಗುತ್ತದೆ . ರೈತರು ಆಕ್ಷೇಪಣೆಯೊಂದಿಗೆ ವಿಮಾ ಕಂತು ಪಾವತಿಸಿದ ರಸೀದಿ, 2021 -22ರ ಪಹಣಿಯಲ್ಲಿ ವಿಮೆಗೆ ನೋ೦ದಾಯಿಸಿದ ಬೆಳೆ ನಮೂದಾಗಿರಬೇಕು, ಬೆಂಬಲ
ಬೆಲೆ ಪ್ರಯೋಜನ ಪಡೆದಿದ್ದಲ್ಲಿ ರಸೀದಿ ಲಗತ್ತಿಸಬೇಕು.ವಿಮೆಗೆ ನೋಂದಾಯಿತ ಬೆಳೆ ಉತ್ಪನ್ನವನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಲ್ಲಿ ರಸೀದಿ ಲಗತ್ತಿಸಬೇಕು ಎಂದು ಸಹಾಯಕ ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.. ನಿಮ್ಮ ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಿ
https://www.samrakshane.karnataka.gov.in/
ಹಂತ 1:
ನಂತರ ವರ್ಷದ ಆಯ್ಕೆ “2022-23” ಮತ್ತು ಋುತು “Kharif” ಎಂದು select ಮಾಡಿ, ಮುಂದೆ/Go ಮೇಲೆ click ಮಾಡಿ
ಹಂತ 2:
Farmer ಕಾಲಂನಲ್ಲಿ “check status” ಮೇಲೆ ಕ್ಲಿಕ್ ಮಾಡಿ
ಹಂತ 3:
Mobile ನಂಬರ್ ಮೇಲೆ select ಮಾಡಿ ನಿಮ್ಮ ಮೊಬೈಲ್ ನಂಬರ್ ಹಾಕಿ ಅಲ್ಲಿರುವ “captcha” Type ಮಾಡಿ ನಿಮ್ಮ ಬೆಳೆ ವಿಮೆಯ ಸ್ಥಿತಿಗತಿ ತಿಳಿಯಬಹುದು