ಅನ್ನಭಾಗ್ಯ ಯೋಜನೆ ಅಗಷ್ಟ ತಿಂಗಳ ಹಣ ಜಮಾ ದಿನಾಂಕ ನಿಗದಿ ಈ ದಿನದಂದು ಹಣ ಜಮೆ
ಅನ್ನಭಾಗ್ಯ ಯೋಜನೆಯ ಜುಲೈ ತಿಂಗಳ ಹಣ ಜಮ ಆಗಿದೆ. ಆಗಸ್ಟ್ ತಿಂಗಳಿನ ಹಣ ಜಮಾ ಮಾಡುವ ದಿನಾಂಕ ನಿಗದಿ ಮಾಡಿದ್ದು ಎಲ್ಲಾ ಜಿಲ್ಲೆಗಳಿಗೆ ಏಕಕಾಲಕ್ಕೆ ಹಣ ಬಿಡುಗಡೆ ಮಾಡಲಾಗುತ್ತದೆ.ಅನ್ನಭಾಗ್ಯ ಯೋಜನೆಯ ಮೊದಲನೇ ಕಂತಿನಲ್ಲಿ ಯಾರೆಲ್ಲ ರೇಷನ್ ಕಾರ್ಡ್ ತೊಂದರೆ ಇತ್ತು ಅಂತಹವರಿಗೆ ಹಣ ಜಮಾ ಆಗಿರಲಿಲ್ಲ. ಅವರೆಲ್ಲ ಈ ಸಾರಿ ಆ ಸಮಸ್ಯೆಯನ್ನು ಪರಹರಿಸಿಕೊಂಡಿದ್ದರೆ ಅವರಿಗೂ ಕೂಡಾ ಈ ತಿಂಗಳಿನ ಅಂದರೆ ಆಗಸ್ಟ್ ತಿಂಗಳಿನ ಹಣ ಜಮಾ ಆಗುತ್ತದೆ.ಅನ್ನಭಾಗ್ಯ ಯೋಜನೆಯ ಆಗಷ್ಟ ತಿಂಗಳಿನ ಹಣ ಆಗಸ್ಟ್ 25/08/2023 ರಂದು ರೇಷನ್ ಕಾರ್ಡ್ ಮುಖ್ಯಸ್ಥರ ಖಾತೆಗೆ ನೇರವಾಗಿ ಡಿಬಿಟಿ ಮುಖಾಂತರ ವರ್ಗಾವಣೆ ಮಾಡಲಾಗುತ್ತದೆ.ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗುವ ಬಗ್ಗೆ ತಿಳಿದುಕೊಳ್ಳಲು ಕರ್ನಾಟಕ ಸರ್ಕಾರದ ಆಹಾರ ಇಲಾಖೆಯ ವೆಬ್ ಸೈಟ್ ಹೋಗಿ ಇ-ಸೇವೆಗಳು ಎಂಬ ಆಯ್ಕೇ ಮೇಲೆ ಒತ್ತಿ. ಒತ್ತಿದ ಮೇಲೆ ಎಡಬದಿಗೆ ಇ-ಸ್ಥಿತಿ ಎಂಬ ಅಯ್ಕೇ ಕಾಣುತ್ತದೆ. ಅದರ ಮೇಲೆ ಒತ್ತಿದ ಬಳಿಕ ಜಿಲ್ಲೆಯ ಆಯ್ಕೆ ಬರುತ್ತದೆ ಅದರಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಬೇಕು. ಆಯ್ಕೆ ಮಾಡಿದ ನಂತರ ಎಡಬದಿಗೆ ಬಾಕ್ಸ್ ಬರುತ್ತವೆ ಅದರಲ್ಲಿ ಡಿಬಿಟಿ ಸ್ಟೇಟಸ್ ಅಂತ ಆಯ್ಕೆ ಬರುತ್ತದೆ,ಅದರ ಮೇಲೆ ಒತ್ತಿ ಆಗ ಅಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ(ನಂಬರ) ಹಾಕಿ ಆಗಸ್ಟ್ ತಿಂಗಳು ಸೆಲೆಕ್ಟ್ ಮಾಡಿ ಕೆಳಗೆ ಬರುವ ಕ್ಯಾಪ್ಟ್ಚ ಹಾಕಿ ಎಂಟರ್ ಮಾಡಿ ನಿಮ್ಮ ಖಾತೆಗೆ ಹಣ ಜಮಾ ಆಗಿದೆ ಅಥವಾ ಇಲ್ಲವೋ ಎಂದು ತಿಳಿದುಕೊಳ್ಳಿ.
ಆಹಾರ ಇಲಾಖೆಯ ವೆಬ್ ಸೈಟ್ ಲಿಂಕ್:-https://ahara.kar.nic.in/lpg/
